BJP president Amit Shah is coming to Bengaluru on December 31st to take the stock of political situation arising out of Mahadayi dispute. North Karnataka farmers will be looking up to Amit to find a amicable solution.
ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನವರು ಬಿಜೆಪಿ ನೀರು ಕುಡಿಸುತ್ತಾರೋ ಅಥವಾ ಬಿಜೆಪಿಯವರು ಕಾಂಗ್ರೆಸ್ಸಿಗೆ ನೀರು ಕುಡಿಸುತ್ತಾರೋ ಗೊತ್ತಿಲ್ಲ, ಆದರೆ, ವಿವಾದ ಇತ್ಯರ್ಥವಾಗದಿದ್ದರೆ ಜನರಂತೂ ಎರಡೂ ಪಕ್ಷಕ್ಕೆ ನೀರು ಕುಡಿಸುವುದು ಗ್ಯಾರಂಟಿ. ಮಹದಾಯಿಗೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಯಡಿಯೂರಪ್ಪನವರಿಗೆ ಬರೆದಿರುವ 'ಅನಗತ್ಯ'ದ ಓಲೆ ಎರಡೂ ಪಕ್ಷಗಳ ನಾಯಕರನ್ನು ಕಂಗೆಡಿಸಿವೆ. ಎಲ್ಲಕ್ಕಿಂತ ಹೆಚ್ಚಾಗಿ ಯಡಿಯೂರಪ್ಪನವರ ಕುತ್ತಿಗೆಯನ್ನು ಈ ವಿವಾದ ಸುತ್ತಿಕೊಂಡಿದೆ.ಬೆಂಗಳೂರಿನಲ್ಲಿ ಸತತ ಐದು ದಿನಗಳ ಕಾಲ ಉತ್ತರ ಕರ್ನಾಟಕದ ರೈತರು, ಅವರ ಕುಟುಂಬಸ್ಥರು ಬಿಜೆಪಿ ಕಚೇರಿಯ ಎದಿರು ಪ್ರತಿಭಟನೆ ನಡೆಸಿ, ಬಿಜೆಪಿ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪನವರಿಗೆ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿದ್ದಾರೆ. ಯಡಿಯೂರಪ್ಪ ರೈತರೊಡನೆ ನಡೆಸಿದ ಸಂಧಾನ ವಿಫಲವಾಗಿತ್ತು.ಈ ವಿವಾದದಿಂದ ಹೊರಬರುವುದು ಹೇಗೆ? ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುವುದರೊಳಗಾಗಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು ಹೇಗೆ? ಉಗ್ರ ಪ್ರತಿಭಟನೆಗೆ ಇಳಿದಿರುವ ಉತ್ತರ ಕರ್ನಾಟಕ ರೈತರಿಗೆ ಮನವರಿಕೆಯಾಗುವಂತೆ ಉತ್ತರ ನೀಡುವುದು ಹೇಗೆ?